KUDALA SANGAMA DEVELOPMENT BOARD

    Revenue Department, Govt of Karnataka

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

About Kshetra


story

Kudala Sangama Kshetra

"Holy place at Krishna & Malaprabha rivers confluence"

“ಕೂಡಲಸಂಗಮ” ಇಂದು ಕರ್ನಾಟಕದಲ್ಲಿ ಸುಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವವನ್ನು ಹೊಂದಿರುವ ಈ ಸ್ಥಳವು ಇದು ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಸಂಗಮಿಸುವ ಪವಿತ್ರವಾದ ತೀರ್ಥಕ್ಷೇತ್ರವೂ ಹೌದು. ಕಳೆದ ಎಂಟನೂರು ವರ್ಷಗಳಿಂದ ಕೂಡಲಸಂಗಮ ಕ್ಷೇತ್ರವು ಒಂದು ಪುಟ್ಟ ಗ್ರಾಮವಾಗಿ ಶ್ರದ್ಧಾವಂತರಿಗೆ ಯಾತ್ರಾ ಸ್ಥಳವಾಗಿದೆ. ಸಂಗಮ ಬಿಂದುವಿನಲ್ಲಿರುವ ಐಕ್ಯ ಮಂಟಪ ಹಾಗೂ ಸಂಗಮನಾಥ ದೇವಸ್ಥಾನವು ನಾರಾಯಣಪುರ ಜಲಾಶಯದಲ್ಲಿ ಮುಳುಗುವ ಭೀತಿಗೆ ಒಳಗಾಗಾಗ ಅವುಗಳ ಸಂರಕ್ಷಣೆಗಾಗಿ ನಾಡಿನಾದ್ಯಂತ ನಡೆದ ಚರ್ಚೆ ಚಿಂತನೆಗಳಿಂದ ಈ ಕ್ಷೇತ್ರವನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿ ಈ ಕ್ಷೇತ್ರವನ್ನು ಸುಂದರವಾಗಿ ಪುನರುಜ್ಜೀವನಗೊಳಿಸಿದೆ.

ಕೂಡಲಸಂಗಮದ ಇತಿಹಾಸದಲ್ಲಿ 12ನೇ ಶತಮಾನ ಪ್ರಮುಖವಾದ ಕಾಲಘಟ್ಟವೆಂದು ಹೇಳಬಹುದು. ಬಸವಣ್ಣನವರು ಇದೇ ಸ್ಥಳದಲ್ಲಿ ವಿದ್ಯಾಭ್ಯಾಸ ಮಾಡಿದರು. ಶ್ರೀ ಸಂಗಮೇಶ್ವರನನ್ನು ನಿರಂತರವಾಗಿ ಪೂಜಿಸಿದರು. ಬಸವಣ್ಣನವರು ಮಹಾನ್‌ದಾರ್ಶನಿಕರೂ, ಸಮಾಜ ಸುಧಾರಣೆಯ ಚಿಂತಕರು ಆಗಿದ್ದರು. ಅವರು ರಚಿಸಿದ ವಚನ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಅವರು ತಮ್ಮ ವಚನಗಳಲ್ಲಿ ಬಳಸಿದ ಕೂಡಲಸಂಗಮದೇವ ಎಂಬ ನಾಮಾಂಕಿತದಿಂದಾಗಿ ಕೂಡಲಸಂಗಮ ಕ್ಷೇತ್ರವು ವಿಶ್ವದಾದ್ಯಂತ ಪ್ರಸಿದ್ಧಿಪಡೆಯಿತು. ನಂತರ ಬಸವಕಲ್ಯಾಣವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ಬಿಜ್ಜಳರಾಜನ ಆಸ್ಥಾನದಲ್ಲಿ ಬಸವಣ್ಣನವರು ಮಂತ್ರಿ ಪದವಿಯನ್ನು ಅಲಂಕರಿಸಿದರು. ಅಲ್ಲಿಂದಲೇ ಅವರು ತಮ್ಮ ಕಾಯಕ, ದಾಸೋಹ ಮತ್ತು ಸಮಾನತೆಯ ಪರಿಕಲ್ಪನೆಗಳಿಗೆ ಮೂರ್ತರೂಪವನ್ನು ಕೊಟ್ಟರು. ಹೀಗೆ ತಮಗೆ ವಿದ್ಯಾಭ್ಯಾಸ ನೀಡಿದ ಕೂಡಲಸಂಗಮ ಕ್ಷೇತ್ರವನ್ನು ಇದೇ ವಿಶ್ವಕ್ಕೆ ಪರಿಚಯಿಸಿ ವಿಶ್ವಮಾನವರಾದರು.

ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡಲಸಂಗಮ ಕ್ಷೇತ್ರ ಬೆಳೆಯುತ್ತಿದೆ. ಕೂಡಲಸಂಗಮ ಕ್ಷೇತ್ರ ಮತ್ತೆ ಈ ದಶಕದಲ್ಲಿ ರಾಜ್ಯದಲ್ಲೇ ಗಮನ ಸೆಳೆಯುವ ಒಂದು ಸುಪ್ರಸಿದ್ಧ ಯಾತ್ರಾಸ್ಥಳವೆಂದು ಗುರುತಿಸಲ್ಪಟ್ಟಿದೆ. ಕರ್ನಾಟಕ ಸರ್ಕಾರ, ಕೂಡಲಸಂಗಮ ಅಭಿವೃದ್ಧಿ ಮಂಡಳಿ अधिनियम 1994ನ್ನು ರಚಿಸಿ ತನ್ಮೂಲಕ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿದೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ ಜೆ. ಹೆಚ್. ಪಾಟೀಲರು ಈ ಕ್ಷೇತ್ರದ ಅಭಿವೃದ್ಧಿಗಾಗಿ 35.58 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದರು. ಸನ್ಮಾನ್ಯ ಸಚಿವರುಗಳು, ಸಂಸದರು, ಶಾಸಕರು, ಅಭಿಯಂತರರು, ವಾಸ್ತುಶಿಲ್ಪಿಗಳು, ತಜ್ಞರು, ನಾಡಿನ ಎಲ್ಲ ಜನರು ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಪ್ರೇರಣೆ ನೀಡಿದರು.

ಕರ್ನಾಟಕ ಸರ್ಕಾರ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಂಪೂರ್ಣ ಹೊಣೆಯನ್ನು ಡಾ|| ಎಸ್. ಎಮ್. ಜಾಮದಾರ, ಭಾ.ಆ.ಸೇ. ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ ಹಾಗೂ ಆಯುಕ್ತರು, ಪುನರ್ವಸತಿ, ಪುನರ್ನಿರ್ಮಾಣ, ಕೃಷ್ಣಾ ಮೇಲ್ದಂಡೆ ಯೋಜನೆ ಬಾಗಲಕೋಟ ಇವರಿಗೆ ಸಂಪೂರ್ಣವಾಗಿ ವಹಿಸಿಕೊಟ್ಟ ನಂತರ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದರು. ಅವರ ದೂರದರ್ಶಿತೃ ಹಾಗೂ ಮಾರ್ಗದರ್ಶನದ ಫಲಶ್ರುತಿಯೇ ಇಂದು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ವಾಸ್ತುವಿನ್ಯಾಸ ಹೊಂದಿದ ಹಲವಾರು ಸುಂದರ ಹಾಗೂ ಸುಭದ್ರವಾದ ಕಟ್ಟಡಗಳು ನಿರ್ಮಿಸಲ್ಪಟ್ಟಿವೆ. ಅವರು ಈ ಎಲ್ಲ ಕಟ್ಟಡಗಳ ಪರಿಕಲ್ಪನೆಯನ್ನು ನೀಡಿದುದರ ಹಾಗೂ ವಶಿಷ್ಟವಾದ ವಾಸ್ತುಶೈಲೆಯ ಜ್ಞಾನವನ್ನು ಧಾರರೆ ಎರೆದುದರ ಫಲವೇ ನಮ್ಮೆಲ್ಲರೆದುರಿಗೆ ಭವ್ಯವಾಗಿ ಕಂಗೊಳಿಸುತ್ತಿವೆ. ನೋಡುಗರು ವಿಸ್ಮಯದಿಂದ ಬೆರಳು ಕಚ್ಚುವಂತೆ ಮಾಡುವ ಕಟ್ಟಡಗಳ ಸಮುಚ್ಚಯ ಸುಂದರವಾದ ಉದ್ಯಾನವನಗಳನ್ನು ನಿರ್ಮಿಸಲು ಸತತವಾಗಿ ಮಾರ್ಗದರ್ಶನ ನೀಡಿದುದರ ಫಲವೇ ಸುತ್ತಲಿನ ಪರಿಸರ ಹಸಿರಾಗಿ ಕಣ್ಣನಗಳನ್ನು ತಣಿಸುತ್ತದೆ. ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇಲ್ಲಿನ ಭೌಗೋಳಿಕ ಪ್ರದೇಶದಲ್ಲಿ ಆದ ಅಪೂರ್ವ ಬದಲಾವಣೆ ಹೇಗೆ ಇಲ್ಲಿನ ಜನಜೀವನದಲ್ಲಿ ಸಾಮಾಜಿಕ, ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಯಿತೆಂಬುದು ಗಮನಿಸಬಹುದಾದ ಅಂಶವಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆ ಈ ಕ್ಷೇತ್ರಕ್ಕೆ ಸೌಂದರ್ಯದ ಮೆರಗನ್ನು ತಂದುಕೊಟ್ಟಿದೆ. ಧಾರ್ಮಿಕ ಕಟ್ಟಡಗಳ ಸಂರಕ್ಷಣೆಯ ಜೊತೆಗೆ ಈ ಪವಿತ್ರ ಕ್ಷೇತ್ರ ಒಂದು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಿದೆ. ಇಂದು ಈ ಕ್ಷೇತ್ರಕ್ಕೆ ಪ್ರತಿನಿತ್ಯ ಸಹಸ್ರಾರು ಜನ ಪ್ರವಾಸಿಗರು ಬರುವಂತಾಗಿದೆ.

"Kudalasangama" today is a world-famous tourist destination in Karnataka. Possessing historical and heritage significance, this place is also a sacred pilgrimage site where the Krishna and Malaprabha rivers confluence. For the past eight hundred years, the Kudalasangama region has been a small village serving as a pilgrimage center for devotees. When the Aikya Mantapa and the Sangamanatha Temple at the confluence point faced the threat of submergence due to the Narayanpura Dam, discussions and deliberations took place across the state for their protection; following this, the government stepped forward to preserve the region and beautifully rejuvenated it.

The 12th century can be considered a major milestone in the history of Kudalasangama. Lord Basavanna received his education at this very place. He continuously worshipped Lord Sangameshwara. Basavanna was a great visionary and a social reform thinker. The Vachana literature he composed enriched Kannada literature. Due to the signature name "Kudalasangamadeva" that he used in his vachanas, the Kudalasangama region gained fame worldwide. Later, making Basavakalyana his place of work (Karmabhoomi), Basavanna served as a minister in the court of King Bijjala. It was from there that he gave concrete shape to his concepts of work as worship (Kayaka), community dining/service (Dasoha), and equality. In this way, he introduced Kudalasangama—the place that educated him—to the entire world and became a universal personality (Vishwamanava).

Today, the Kudalasangama region is growing on an international scale. In this decade, it has once again been recognized as a prominent pilgrimage site attracting attention across the state. The Government of Karnataka enacted the Kudalasangama Development Board Act of 1994, thereby comprehensively developing the region. The former Chief Minister of Karnataka, the Honorable Shri J. H. Patel, released a grant of Rs. 35.58 crores for the development of this area. Honorable ministers, MPs, MLAs, engineers, architects, experts, and all the people of the state inspired the development of this region.

After the Government of Karnataka entrusted the full responsibility of developing this region to Dr. S. M. Jamdar, IAS, Secretary to the Government of Karnataka (Revenue Department) and Commissioner for Resettlement, Rehabilitation, and Upper Krishna Project, Bagalkot, he worked day and night to successfully execute the development works. As a result of his vision and guidance, several beautiful and sturdy structures of international architectural renown have been constructed today. The majestic buildings standing before us are the outcome of his conceptualization and his sharing of unique architectural knowledge. The guidance provided to construct this complex of awe-inspiring buildings alongside beautiful gardens has resulted in a green surrounding environment that soothes the eyes.

In the context of Kudalasangama's development, the extraordinary geographical transformation of this area and its impact on the social and economic growth of local life is a notable aspect. International-level development has added a touch of grandeur and beauty to this shrine. Alongside the preservation of religious structures, this sacred region has emerged as an international tourist center. Today, thousands of tourists visit this site daily.