ಕಾರ್ಯಕ್ರಮಗಳ ಕ್ಯಾಲೆಂಡರ್
ಕೂಡಲ ಸಂಗಮ ಅಭಿವೃದ್ಧಿ ಮಂಡಳಿ
ಕ್ರ ಸ೦ |
ಕಾರ್ಯಕ್ರಮದ ಹೆಸರು |
ವಿವರಗಳು |
ಸ೦ಭವನೀಯ ದಿನಾ೦ಕ |
---|---|---|---|
1 |
ಚೈತ್ರ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು
|
ಚೈತ್ರ ಮಾಸ ಬಹುಳ ಪಂಚಮಿ ದಿವಸದಂದು ಶ್ರೀ ಸಂಗಮೇಶ್ವರ ದೇವರ ರಥೋತ್ಸವ ಜರುಗುವದು. ರಥೋತ್ಸವ ಜರುಗುವ ಹಿಂದಿನ 9 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಕೆಳಗಿನಂತಿವೆ.
5) ರಥೋತ್ಸವದ ನಂತರ ಏಳನೆ ದಿವಸದಂದು ನೀಲಮ್ಮನ ಪಲ್ಲಕ್ಕಿ ಉತ್ಸವ ನಡೆಯುವದು. |
|
2 |
ವೈಶಾಖ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು
|
ಅಕ್ಷಯ ತೃತೀಯ ದಿನದಂದು ಬಸವ ಜಯಂತಿಯನ್ನು ಶ್ರೀ ಬಸವೇಶ್ವರರ ಭಾವ ಚಿತ್ರದ ಮೆರವಣೆಗೆ ಕಾರ್ಯಕ್ರಮ ಜರುಗುವದು |
|
3 |
ಶ್ರಾವಣ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು
|
ಶ್ರಾವಣ ಮಾಸದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅರ್ಚನೆಗಳನ್ನು ಮಾಡಲಾಗುವದು. ಶ್ರಾವಣ ಮಾಸದ ಕೊನೆಯ ಗುರುವಾರದಂದು ನದಿಯ ಮಧ್ಯದ ದ್ವೀಪದಲ್ಲಿರುವ ಚರಲಿಂಗೇಶ್ವರ ಮೂರ್ತಿಗೆ ಅಭಿಷೇಕ ಜರುಗಿಸಿ ತಂಗಡಿಗಿಯ ನೀಲಮ್ಮನ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಜರುಗುವದು. |
|
4 |
ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು
|
ದೀಪಾವಳಿ ಪ್ರತಿಪದೆ ಪಾಡ್ಯ ದಿವಸದಂದು ಏಳ್ಳ ಅಮವಾಸೆ ಬರುವುದಕ್ಕಿಂತ ಮುಂಚಿನ ಸೋಮವಾರದವರೆಗೆ ದೇವಸ್ಥಾನದಲ್ಲಿ ನಿತ್ಯ ದೀಪೋತ್ಸವ ನಡೆಯುವದು. ಕಾರ್ತಿಕ ಮಾಸದ ಕೊನೆಯ ದಿನ ಪಲ್ಲಕ್ಕಿ ಜರುಗುವದು. ಅದಲ್ಲದೆ ಪುರವಂತರ ಮೆರವಣಿಗೆಯೂ ಸಹ ನಡೆಯುವದು. |
|
5 |
ಪುಷ್ಯ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು
|
ಮಕರ ಸಂಕ್ರಾಂತಿ ಉತ್ಸವದಂದು ಸಹಸ್ರಾರು ಭಕ್ತರು ನದಿ ಸ್ನಾನ ಮಾಡಿ ಪುನಿತರಾಗುವರು ಅದೇ ದಿವಸ ಸಾಯಂಕಾಲ ಶ್ರೀ.ಸಂಗಮೇಶ್ವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗುವದು. ಅದಲ್ಲದೇ ಶರಣ ಮೇಳವೂ ಸಹ ಜರುಗುವದು. |