ಕೂಡಲ ಸಂಗಮ ಅಭಿವೃದ್ಧಿ ಮಂಡಳಿ

    ಕಂದಾಯ ಇಲಾಖೆ, ಕರ್ನಾಟಕ ಸರಕಾರ

    ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ

Pooja List

shiva_pooje

ಪೂಜಾ ಸೇವೆ

ಕೂಡಲ ಸಂಗಮ ಅಭಿವೃದ್ಧಿ ಮಂಡಳಿ





ಶ್ರೀ ಕೂಡಲಸಂಗಮೇಶ್ವರ ದೇವಸ್ಥಾನ, ಸೇವಾ ವಿವರ


Pooje
ನಿರಂತರ ಅಭಿಷೇಕ • Rs 4,000

5:30 AM to 8:30 AM ( ಭಕ್ತರು ನಿಗಧಿ ಪಡಿಸಿದ ದಿವಸಗಳಲ್ಲಿ)

2 ಪ್ರಸಾದ
Pooje
ಮೊದಲನೇ / ಆನ್ಲೈನ್ ರುದ್ರಾಭಿಷೇಕ • Rs 500

ಬೆಳಿಗ್ಗೆ: 6-30 ಪ್ರತಿ ಸೋಮವಾರ ಮಾತ್ರ.

ಪ್ರಸಾದ, ವಿಭೂತಿ ಮತ್ತು ಸಕ್ಕರೆ ಪ್ರಸಾದ
Pooje
ಪ್ರತಿ ಅಮವಾಸೆ ರುದ್ರಾಭಿಷೇಕ • Rs 3600

ಬೆಳಿಗ್ಗೆ: 6-30 ಘಂಟೆ ( ಒಂದು ವರ್ಷದ ವರೆಗೆ ಮಾತ್ರ)

2 ಪ್ರಸಾದ
Pooje
ಪ್ರತಿ ಅಮವಾಸೆ ಪಂಚಾಮೃತ ಅಭಿಷೇಕ • Rs 1800

ಬೆಳಿಗ್ಗೆ: 10-00 ಘಂಟೆಗೆ ( ಒಂದು ವರ್ಷದ ವರೆಗೆ ಮಾತ್ರ)

1 ಪ್ರಸಾದ
Pooje
ರುದ್ರಾಭಿಷೇಕ • Rs 300

ಬೆಳಿಗ್ಗೆ: 6-30, 8-30, ಘಂಟೆಗೆ. ಪ್ರತಿದಿನ

2 ಪ್ರಸಾದ
Pooje
ಪಂಚಾಮೃತ ಅಭಿಷೇಕ• Rs 150

ಬೆಳಿಗ್ಗೆ: 10-30, ಘಂಟೆ. ಪ್ರತಿದಿನ

1 ಪ್ರಸಾದ
Pooje
ಜವಳ • Rs.100

ಬೆಳಿಗ್ಗೆ: 8-00 ರಿಂದ ಪ್ರತಿದಿನ.

ದೇವಸ್ಥಾನದಲ್ಲಿ ಮಾತ್ರ ಹಣ ಪಾವತಿ ಮಾಡಬೇಕು

Pooje
ದೀರ್ಘದಂಡ ನಮಸ್ಕಾರ • Rs 100

ಬೆಳಿಗ್ಗೆ: 6-30ರಿಂದ ಪ್ರಾರಂಭ.

ದೇವಸ್ಥಾನದಲ್ಲಿ ಮಾತ್ರ ಹಣ ಪಾವತಿ ಮಾಡಬೇಕು

Pooje
ಮದುವೆ ( ಲಗ್ನ)• Rs 1000

ಬೆಳಿಗ್ಗೆ: 8-00 ರಿಂದ ಸಂಜೆ: 7-00

ದೇವಸ್ಥಾನದಲ್ಲಿ ಮಾತ್ರ ಹಣ ಪಾವತಿ ಮಾಡಬೇಕು

ವಿಶೇಷ ಸೂಚನೆ; ವಧು-ವರರ ಜನ್ಮ ದಾಖಲೆಯ ದೃಢಿಕರಿಸಿದ ಪ್ರಮಾಣ ಪತ್ರ ಹಾಗೂ 2+2 ಪಾಸಪೋರ್ಟ ಸೈಜ್ ಫೋಟೊ ಅತ್ಯವಶ್ಯಕ
Pooje
ತುಲಾಭಾರದ ಕಾಣಿಕೆ•

ಬೆಳಿಗ್ಗೆ: 9-00 ರಿಂದಸಂಜೆ: 7-00.

Pooje
ಅಕ್ಕಿ ಸೇವೆ• Rs 51

ಪ್ರತಿ ದಿನ

ಪ್ರಸಾದ
Pooje
ಐಕ್ಯ ಮಂಟಪ ದರ್ಶನ ಶುಲ್ಕ• Rs 05

ಬೆಳಿಗ್ಗೆ: 6-00 ರಿಂದ ಸಂಜೆ: 8-00

ಪ್ರತಿಯೊಬ್ಬರಿಗೆ

೧೦ ವರ್ಷದ ಒಳಗಿನ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

 

ಶ್ರೀ ಸಂಗಮೇಶ್ವರ ಸನ್ನಿಧಿಗೆ ದೈನಂದಿನ ಸೇವಾ ವಿವರ


ಪ್ರತಿದಿನ ಬೆಳಿಗ್ಗೆ 6-00 ಗಂಟೆಯಿಂದ 12-00 ರವರೆಗೆ

 

ಕ್ರ ಸ೦ ಸೇವೆಗಳು ದರ ವೇಳೆ ಸೌಲಭ್ಯಗಳು
1 ಏಕಾದಶಿ ರುದ್ರಾಭಿಷೇಕ ರೂ 300 ಏಕಾದಶಿ ದಿವಸ  
2 ರುದ್ರಾಭಿಷೇಕ ರೂ 200 ಬೆಳಿಗ್ಗೆ 6ಕ್ಕೆ  
3 ಪಂಚಾಮೃತ ಅಭಿಷೇಕ ರೂ 100 ಬೆಳಿಗ್ಗೆ 8 ರಿಂದ  
4 ಧೀರ್ಘದಂಡ ನಮಸ್ಕಾರ ರೂ 25    
5 ಜವಳ ರೂ 50    
6 ಮದುವೆ ನೋಂದಣಿ ಫೀ ರೂ 500    
7 ವಿಭೂತಿ ಪ್ರಸಾದ ರೂ 10    
8 ಲಾಡು ಪ್ರಸಾದ ರೂ 10    
9 ತುಲಾಭಾರ      
10 ನಿರಂತರ ಅಭಿಷೇಕ ರೂ 2000    
11 ಪ್ರತಿದಿನ ರುದ್ರಾಭಿಷೇಕ ಒಂದು ವರ್ಷಕ್ಕೆ ರೂ 50000    
12 ಪ್ರತಿದಿನ ಪಂಚಾಮೃತ ಒಂದು ವರ್ಷಕ್ಕೆ ರೂ 25000    

 

ಶ್ರೀ.ಸಂಗಮೇಶ್ವರ ದೇವಸ್ಥಾನ ಕೂಡಲಸಂಗಮದಲ್ಲಿ ವರ್ಷವಿಡಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳ ವಿವರಗಳಿಂತಿವೆ.

 

ಕ್ರ ಸ೦ ಹೆಸರು ವಿವರ

 

1

 

ನಿತ್ಯ ಕಾರ್ಯಕ್ರಮಗಳು.

 

ಶ್ರೀಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿ ದಿನ ಐದು ಪೂಜೆಗಳಾಗುತ್ತೆವೆ. ಬೆಳಿಗ್ಗೆ, 5-00 ಘಂಟೆಗೆ ರುದ್ರಾಭೀಷೇಕ 12-00 ಧೂಪಾರತಿ ಪೂಜೆ ಸಾಯಂಕಾಲ 5-00 ಘಂಟೆಗೆ ಪೂಜೆ, ರಾತ್ರಿ 8-30 ಮಂಗಳಾರತಿ.

 

 

2

 

ಚೈತ್ರ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ಚೈತ್ರ ಮಾಸ ಬಹುಳ ಪಂಚಮಿ ದಿವಸದಂದು ಶ್ರೀ ಸಂಗಮೇಶ್ವರ ದೇವರ ರಥೋತ್ಸವ ಜರುಗುವದು. ರಥೋತ್ಸವ ಜರುಗುವ ಹಿಂದಿನ 9 ದಿನಗಳ ಧಾರ್ಮಿಕ ಕಾರ್ಯಕ್ರಮಗಳು ಕೆಳಗಿನಂತಿವೆ.


1) ರಥೋತ್ಸವಹಿಂದಿನ 9 ದಿನಗಳಂದು ಪ್ರತಿ ದಿನ, ಪ್ರವಚನ, ನಾಟಕ, ಇದಲ್ಲದೇ 9 ದಿನಗಳು ಪಲ್ಲಕ್ಕಿ ಉತ್ಸವ ಜರುಗುತ್ತವೆ.


2) ದವನದ ಹುಣ್ಣಿಮೆ ದಿನದಂದು ಶ್ರೀ ಬಸವೇಶ್ವರ ಹಾಗೂ ನೀಲಾಂಬಿಕೆ ಲಗ್ನ ಪತ್ರಿಕೆ ಕಟ್ಟುವದು, ನಂತರ 5 ದಿನಗಳವರೆಗೆ ಪುರವಂತರ ಮೆರವಣಿಗೆ ನಡೆಯುವುವದು.


3) ಹುಣ್ಣಿಮೆ ಆದ ನಾಲ್ಕನೆ ಮತ್ತು ಐದನೆ ದಿನಗಳಂದು ಬೆಳಿಗೆ,5-00 ಘಂಟೆಗೆ ಶ್ರಿ.ಹುಚ್ಚಯ್ಯಾನ ರಥೋತ್ಸವ ಜರುಗುವದು.


4) ಚೈತ್ರ ಬಹುಳ ಪಂಚಮಿ ದಿವಸದಂದು ಬೆಳಿಗ್ಗೆ 9-00 ಘಂಟೆಗೆ ಬಾಗಲಕೋಟ ಪಟ್ಟಣದಿಂದ ಮೇರವಣಿಗೆಯೊಂದಿಗೆ ಶ್ರಿಸಂಗಮೇಶ್ವರ ರಥದ ಕಳಸ ಕೂಡಲಸಂಗಮಕ್ಕೆ ಆಗಮಿಸುವದು ಮತ್ತು ಸಾಯಂಕಾಲ 6-00 ಘಂಟೆಗೆ ರಥೋತ್ಸವು ಜರುಗುವದು.


5) ರಥೋತ್ಸವದ ನಂತರ ಏಳನೆ ದಿವಸದಂದು ನೀಲಮ್ಮನ ಪಲ್ಲಕ್ಕಿ ಉತ್ಸವ ನಡೆಯುವದು.

 

 

3

 

ವೈಶಾಖ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ಅಕ್ಷಯ ತೃತೀಯ ದಿನದಂದು ಬಸವ ಜಯಂತಿಯನ್ನು ಶ್ರೀ ಬಸವೇಶ್ವರರ ಭಾವ ಚಿತ್ರದ ಮೆರವಣೆಗೆ ಕಾರ್ಯಕ್ರಮ ಜರುಗುವದು

 

 

4

 

ಶ್ರಾವಣ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

1)ಶ್ರಾವಣ ಮಾಸದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪ್ರತಿ ಸೋಮವಾರದಂದು ವಿಶೇಷ ಪೂಜೆ, ಅರ್ಚನೆಗಳನ್ನು ಮಾಡಲಾಗುವದು.


2)ಶ್ರಾವಣ ಮಾಸದ ಕೊನೆಯ ಗುರುವಾರದಂದು ನದಿಯ ಮಧ್ಯದ ದ್ವೀಪದಲ್ಲಿರುವ ಚರಲಿಂಗೇಶ್ವರ ಮೂರ್ತಿಗೆ ಅಭಿಷೇಕ ಜರುಗಿಸಿ ತಂಗಡಿಗಿಯ ನೀಲಮ್ಮನ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಜರುಗುವದು.

 

 

5

 

ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ದೀಪಾವಳಿ ಪ್ರತಿಪದೆ ಪಾಡ್ಯ ದಿವಸದಂದು ಏಳ್ಳ ಅಮವಾಸೆ ಬರುವುದಕ್ಕಿಂತ ಮುಂಚಿನ ಸೋಮವಾರದವರೆಗೆ ದೇವಸ್ಥಾನದಲ್ಲಿ ನಿತ್ಯ ದೀಪೋತ್ಸವ ನಡೆಯುವದು. ಕಾರ್ತಿಕ ಮಾಸದ ಕೊನೆಯ ದಿನ ಪಲ್ಲಕ್ಕಿ ಜರುಗುವದು. ಅದಲ್ಲದೆ ಪುರವಂತರ ಮೆರವಣಿಗೆಯೂ ಸಹ ನಡೆಯುವದು.

 

 

6

 

ಪುಷ್ಯ ಮಾಸದಲ್ಲಿ ನಡೆಯುವ ಕಾರ್ಯಕ್ರಮಗಳು

 

ಮಕರ ಸಂಕ್ರಾಂತಿ ಉತ್ಸವದಂದು ಸಹಸ್ರಾರು ಭಕ್ತರು ನದಿ ಸ್ನಾನ ಮಾಡಿ ಪುನಿತರಾಗುವರು ಅದೇ ದಿವಸ ಸಾಯಂಕಾಲ ಶ್ರೀ.ಸಂಗಮೇಶ್ವರ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗುವದು. ಅದಲ್ಲದೇ ಶರಣ ಮೇಳವೂ ಸಹ ಜರುಗುವದು.