ಪ್ರೇಕ್ಷಣೀಯ ಸ್ಥಳಗಳು
ಕೂಡಲ ಸಂಗಮ ಅಭಿವೃದ್ಧಿ ಮಂಡಳಿ
ಕೂಡಲಸಂಗಮದಿಂದ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಬಗೆಗೆ ಮಾಹಿತಿ
1. ಆಲಮಟ್ಟಿ ಆಣೆಕಟ್ಟು : 32 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ: 13 ನ್ನು ತಲುಪಿ ಬಲಭಾಗದ ರಸ್ತೆಗೆ ಹೊರಳಿ 24 ಕಿ.ಮಿ. ಕ್ರಮಿಸಿದಲ್ಲಿ ಆಲಮಟ್ಟಿಗೆ ತಲುಪಬಹುದು. ಇಲ್ಲಿನ ಆಣೆಕಟ್ಟು, ಸುಂದರವಾದ ಉದ್ಯಾನವನಗಳಾದ ರಾಕ್ ಗಾರ್ಡನ್, ಕೃಷ್ಣಾಪಾರ್ಕ, ಮೊಘಲ್ ಗಾರ್ಡನ್ ಹಾಗೂ ಪ್ರತಿ ರಾತ್ರಿ 7.30 ರಿಂದ ಮ್ಯೂಜಿಕಲ್ ಫೌಂಟೆನ್ ಇತ್ಯಾದಿಗಳನ್ನು ನೋಡಬಹುದು.
2. ಬಸವನ ಬಾಗೇವಾಡಿ 66 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ 13 ರ ಮಾರ್ಗವಾಗಿ ನಿಡಗುಂದಿ ತಲುಪಿ ಅಲ್ಲಿಂದ 4 ಕಿ.ಮಿ. ದೂರವನ್ನು ಕ್ರಮಿಸಿದ ನಂತರ ಬಲಕ್ಕೆ ತಿರುಗಿ ರಸ್ತೆಯ ಮೂಲಕ ಬಸವನ ಬಾಗೇವಾಡಿ ತಲುಪಬಹುದು. ಅಲ್ಲಿ ಬಸವೇಶ್ವರ ದೇವಸ್ಥಾನ, ಬಸವ ಜನ್ಮ ಭೂಮಿಯಲ್ಲಿ ನಿರ್ಮಿಸಿದ ಅತ್ಯಾಧುನಿಕ ಬಸವ ಸ್ಮಾರಕ ಕಟ್ಟಡವನ್ನು ನೋಡಬಹುದು.
ಹಾಗೂ ಅಲ್ಲಿಂದ 10 ಕಿ.ಮಿ ಅಂತರದಲ್ಲಿ ಇಂಗಳೇಶ್ವರ ಗ್ರಾಮವಿದ್ದು ಇಲ್ಲಿ ಶ್ರೀ ಬಸವೇಶ್ವರರ ತಾಯಿಯ ತವರು ಮನೆಯ ಸ್ಮಾರಕವನ್ನು ನೋಡಬಹುದು.
3. ವಿಜಾಪೂರ : 90 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ಬಲಗಡೆ ತಿರುಗಿ 90 ಕಿ.ಮಿ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ವಿಜಾಪೂರ ತಲುಪಬಹುದು. ಅಲ್ಲಿ ಗೋಲಗುಂಬಜ, ಇಬ್ರಾಹಿಂ ರೋಜಾ, ಶ್ರೀ ಸಿದ್ದೇಶ್ವರ ಗುಡಿ, ತೊರವಿ ಲಕ್ಷ್ಮೀನರಸಿಂಹ ದೇವಾಲಯಗಳನ್ನು ನೋಡಬಹುದು.
4. ಬದಾಮಿ : 70 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ 13 ನ್ನು ತಲುಪಿ ಎಡಕ್ಕೆ ತಿರುಗಿ ಬೆಳಗಲ್ ಕ್ರಾಸಿನಿಂದ ಬಲಕ್ಕೆ ಅಮಿನಗಡ ಮಾರ್ಗವಾಗಿ ಐಹೊಳೆಗೆ ಹೋಗಿ ಅಲ್ಲಿನ ದುರ್ಗಗುಡಿ, ಮೇಗುತಿಗುಡಿ, ಹುಚಮಲ್ಲಿ ಗುಡಿ, ರಾವಣಪಡಿ ಗುಹೆಗಳನ್ನು ನೋಡಬಹುದು. ಅಲ್ಲಿಂದ ಪಟ್ಟದಕಲ್ಲು ತಲುಪಿ ಅಲ್ಲಿ ಪ್ರಾಚೀನ ಶಿಲ್ಪಕಲೆಯಲ್ಲಿ ಕಟ್ಟಿರುವ ಸುಂದರವಾದ ಹಲವಾರು ಗುಡಿಗಳನ್ನು ನೋಡಬಹುದು. ನಂತರ ಮಹಾಕೂಟ, ಶಿವಯೋಗ ಮಂದಿರ, ಬನಶಂಕರಿ ಮಾರ್ಗವಾಗಿ ಬದಾಮಿ ತಲುಪಬಹುದು. ಬದಾಮಿಯಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಮೇಣಬಸದಿ, ಅಗಸ್ತ್ಯತೀರ್ಥ, ಗುಹಾಂತರ ದೇವಾಲಯಗಳನ್ನು ನೋಡಬಹುದು.
5. ಬಾಗಲಕೋಟ 50 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ 13 ನ್ನು ತಲುಪಿ ನೇರವಾಗಿ ಕ್ರಮಿಸಿ ಬಾಗಲಕೋಟೆ ಪಟ್ಟಣವನ್ನು ಸೇರಬಹುದು. ಇಲ್ಲಿನ ವಸ್ತುಸಂಗ್ರಹಾಲಯ, ಕಲಾಭವನ, ಜಿಲ್ಲಾಡಳೀತ ಭವನಗಳು, ಆಧುನಿಕ ವಾಸ್ತುಶೈಲಿಗೆ ಪ್ರಸಿದ್ಧಿಯನ್ನು ಪಡೆದಿರುತ್ತದೆ.
6 ಹೊಸಪೇಟೆ : ಹಂಪಿ : 125 ಕಿ.ಮಿ.
ಕೂಡಲಸಂಗಮ ಕ್ರಾಸಿಗೆ ಹೋಗಿ ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಹೊಸಪೇಟೆಯನ್ನು ತಲುಪುವ ಮುಂಚೆ ತುಂಗಭದ್ರಾ ಆಣೆಕಟ್ಟನ್ನು ನೋಡಬಹುದು. ನಂತರ ಸ್ವಲ್ಪು ದೂರ ಕ್ರಮಿಸಿ 16 ನೇ ಶತಮಾನದಲ್ಲಿನ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯನ್ನು ತಲುಪಿ ಅಲ್ಲಿನ ಪ್ರಾಚೀನ ಶೈಲಿಯಲ್ಲಿನ ವಿರೂಪಾಕ್ಷ ದೇವಸ್ಥಾನ, ಕಮಲ ಮಹಲ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ಸಾಸಿವೆ ಗಣಪ, ನರಸಿಂಹಸ್ವಾಮಿ ಮೂರ್ತಿ, ಬಡವಿ ಲಿಂಗ ಹೀಗೆ ಹಲವಾರು ಸ್ಥಳಗಳನ್ನು ನೋಡಬಹುದು.
7. ತಂಗಡಗಿ 20 ಕಿ.ಮಿ.
ಕೂಡಲಸಂಗಮ ಕ್ರಾಸಿನಿಂದ ಬೆಳಗಲ್ ಮಾರ್ಗವಾಗಿ ಧನ್ನೂರ ತಲುಪಿ ತಂಗಡಗಿಗೆ ಹೋಗುವ ಸೇತುವೆಯ ಮೇಲೆ ಹೋಗಿ ಕೊನೆಯ ಭಾಗದಲ್ಲಿರುವ ತಾಯಿ ನೀಲಾಂಬಿಕೆ, ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವರ ಐಕ್ಯಮಂಟಪಗಳನ್ನು ಸಂದರ್ಶಿಸಬಹುದು.
8. ಐಹೊಳೆ : 35 ಕಿ.ಮಿ.
ಕೂಡಲಸಂಗಮದಿಂದ ಬೆಲಗಲ ಕ್ರಾಸ & ಅಮಿನಗಡ ಮಾರ್ಗವಾಗಿ ಐಹೊಳೆ ತಲುಪಹುದು ಈ ಗ್ರಾಮವು ಭಾರತೀಯ ಪುರಾತತ್ವ ಇಲಾಖೆಯಲ್ಲಿ ವಿಶ್ವಪರಂಪರೆ ಪಟ್ಟಿಯಲ್ಲಿ ಇರುತ್ತದೆ. ಇದನ್ನು ದೇಗುಲಗಳ ನಿರ್ಮಾಣದ ಕಲಿಕಾ ಕೇಂದ್ರವಾಗಿತ್ತು. ನಂತರ ಮುಂದೆ 5 ಕಿ.ಮಿ ದಲ್ಲಿ ಮಹಾಕೂಟ ಮತ್ತು ಶಿವಯೋಗಿ ಮಂದಿರವಿದೆ.
9. ಪಟ್ಟದಕಲ್ಲ : 50 ಕಿ.ಮಿ .
ಐಹೊಳೆಯಿಂದ ಮುಂದೆ 15 ಕಿಮಿ ಬದಾಮಿ ಮಾರ್ಗದಲ್ಲಿ ಐಹೊಳೆ ಗ್ರಾಮವು ಬರುತ್ತದೆ. ಇದು ಸಹ ಭಾರತೀಯ ಪುರಾತತ್ವ ಇಲಾಖೆಯಲ್ಲಿ ವಿಶ್ವಪರಂಪರೆ ಪಟ್ಟಿಯಲ್ಲಿ ಇರುತ್ತದೆ. ಇದನ್ನು ದೇಗುಲಗಳ ತೊಟ್ಟಿಲು ಕರೆಯುತ್ತಾರೆ.